About Us2019-02-21T12:24:31+00:00
mango-board-kannada-slider-01

ನಮ್ಮ ಬಗ್ಗೆ

ನಿಗಮದ ಸ್ಥಾಪನೆ:

ಕರ್ನಾಟಕ ರಾಜ್ಯದಲ್ಲಿ ಕಂಪನಿ ಕಾಯ್ದೆ 1956 ರ ಅಡಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ.) ಎಂಬ ಹೆಸರಿನಲ್ಲಿ ನೊಂದಣಿ ಮಾಡಿದ್ದು, ದಿನಾಂಕ 19-01-2011 ರಿಂದ ಅಸ್ಥಿತ್ವಕ್ಕೆ ಬಂದಿರುತ್ತದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತವು  ರಾಜ್ಯದಲ್ಲಿ ಮಾವಿನ ಬೆಳೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಾವು ಬೆಳೆಗಾರರ ಅಭ್ಯುದಯಕ್ಕೆ ಪೂರಕವಾಗಿ ಮಾವು ಬೇಸಾಯ, ಕೊಯ್ಲೋತ್ತರ ನಿರ್ವಹಣೆ, ಮಾವು ಮಾರಾಟ ಮತ್ತು ಮಾವಿನ ಹಣ್ಣುಗಳ ರಫ್ತಿಗೆ ಪ್ರೋತ್ಸಾಹಿಸುವುದು ಪ್ರಮುಖ ಉದ್ದೇಶವಾಗಿರುತ್ತದೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ರಾಷ್ಟ್ರೀಯ ಉಪಕ್ರಮದಲ್ಲಿ ಒಂದು ಭಾಗವಾಗಿ 2022 ರ ಹೊತ್ತಿಗೆ ಕರ್ನಾಟಕದ ಮಾವು ಬೆಳೆಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಉತ್ತಮ ಕೃಷಿ ಪದ್ದತಿ ಆಳವಡಿಕೆ ಕುರಿತು ತರಬೇತಿ, ತಂತ್ರಜ್ಞಾನ  ಅಳವಡಿಕೆ, ನೇರ ಮಾರುಕಟ್ಟೆ ಕಲ್ಪಿಸಲು ಮತ್ತು  ರೈತ ರಫ್ತುದಾರರಾಗಲು ತರಬೇತಿ ನೀಡುವ ಮೂಲಕ ಉತ್ತಮ ಗುಣಮಟ್ಟದ ಉತ್ಪಾದನೆ ಪಡೆಯಲು ಮತ್ತು ಹೆಚ್ಚಿನ ಆದಾಯ ಗಳಿಸಲು  ಕಾರ್ಯಕ್ರಮ ರೂಪಿಸಲಾಗಿದೆ.

ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ, ನಮ್ಮ ಪ್ರಯತ್ನದಲ್ಲಿ ಗ್ಲೋಬಲ್ Global GAP ಪ್ರಮಾಣಿಕೃತ ತೋಟಗಳಿಂದ ಸಂಗ್ರಹಿಸಲಾದ ರಾಜ್ಯದ ಮಾವಿನ ಸುವಾಸನೆ, ಪರಿಮಳ ಮತ್ತು ರುಚಿಯನ್ನು ಆಸ್ವಾದಿಸಲು ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ.