
ಮಾವು ಅಭಿವೃದ್ಧಿ ಕೇಂದ್ರಗಳು
ಮಾವು ಅಭಿವೃದ್ದಿ ನಿಗಮದ ಕೇಂದ್ರ ಕಛೇರಿ, ಕಾವೇರಿ ಭವನ, ಬೆಂಗಳೂರು ಸೇರಿದಂತೆ ನಿಗಮದ ಅಧೀನದಲ್ಲಿ ಎರಡು ಮಾವು ಅಭಿವೃದ್ಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
1. ಮಾವು ಅಭಿವೃದ್ಧಿ ಕೇಂದ್ರ, ಹೊಗಳಗೆರೆ:
“ಕೊಯ್ಲು ಪೂರ್ವ ಕೇಂದ್ರ” ವು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಕ್ಷೇತ್ರದಲ್ಲಿರುತ್ತದೆ.
ಲಭ್ಯವಿರುವ ಸೌಲಭ್ಯಗಳು:
- ಹೆಚ್ಚಿನ ಸಾಂದ್ರತೆಯ ಅಂತರದಲ್ಲಿ 49 ಮಾವು ಪ್ರಭೇದಗಳ ಜೀನ್ ಬ್ಯಾಂಕ್.
- ಮಾವು ಬೆಳೆಗಾರರಿಗೆ ಅಗತ್ಯವಿರುವ ವಸತಿ ಸಹಿತ/ರಹಿತ ಕೊಯ್ಲು ಪೂರ್ವ ತರಬೇತಿ, ಪ್ರಾತ್ಯಕ್ಷತೆ ಮತ್ತು ತಂತ್ರಜ್ಞಾನದ ಅರಿವು.
2. ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆ:
“ಕೊಯ್ಲೋತ್ತರ ಕೇಂದ್ರ” ವು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ತೋಟಗಾರಿಕೆ ಕ್ಷೇತ್ರದಲ್ಲಿರುತ್ತದೆ.
ಲಭ್ಯವಿರುವ ಸೌಲಭ್ಯಗಳು:
- ಬಿಸಿ ನೀರಿನ ಉಪಚಾರದ ಘಟಕ
- ಹಣ್ಣು ಮಾಗಿಸುವ ಘಟಕ
- ಫ್ರಿ- ಕೂಲಿಂಗ್ ಮತ್ತು ಶೀಥಲ್ ಗೃಹ ಘಟಕ
- ವರ್ಗೀಕರಣ, ಪ್ಯಾಕಿಂಗ್ ಸೌಲಭ್ಯ.
- ಅಪೇಡಾ ಮತ್ತು NPPQ ಅನುಮೋದಿತ ಪ್ಯಾಕ್ ಹೌಸ್.
- ಮಾವು ಸಂಸ್ಕರಿತ ಪದಾರ್ಥಗಳಾದ ಮ್ಯಾಂಗೋ ಬಾರ್, ಮ್ಯಾಂಗೋ ಪಲ್ಫ್, ಉಪ್ಪಿನಕಾಯಿಗಳ ಪ್ರಾತ್ಯಕ್ಷತೆ ಘಟಕ.
- ಮಾವು ಬೆಳೆಗಾರರಿಗೆ ಅಗತ್ಯವಿರುವ ಸಹಿತ/ರಹಿತ ಕೊಯ್ಲೋತ್ತರ ತರಬೇತಿ, ಪ್ರಾತ್ಯಕ್ಷತೆ ಮತ್ತು ತಂತ್ರಜ್ಞಾನದ ಅರಿವು.