Mango Varieties2019-02-21T12:26:29+00:00
mango-board-kannada-slider-01

ಮಾವು ವಿಧಗಳು

ಆಲ್ಫೋನ್ಸೊ/ ಬಾದಾಮಿ/ ಆಪೂಸ್

  • ಮಾವಿನ ಹಣ್ಣುಗಳ ರಾಜ ಎಂದೇ ಖ್ಯಾತಿ
  • ನಾರುರಹಿತ ಬಹಳ ಸಿಹಿ ಮತ್ತು ರುಚಿಕರ
  • ಹೇರಳವಾಗಿರುವ ವಿಟಮಿನ್ ‘ಎ’ ಹಾಗೂ ‘ಸಿ’ ಅಂಶ
  • ಏಪ್ರಿಲ್‍ನಿಂದ ಜೂನ್ ತಿಂಗಳ ನಡುವೆ ಲಭ್ಯವಿರುವ ಮಧ್ಯ ಮಾಸಿಕ ತಳಿ
  • ಟಿಎಸ್‍ಎಸ್: 19.00 ಡಿಗ್ರಿ ಬ್ರಿಕ್ಸ್ ಹಾಗೂ90%ನಷ್ಟು ತಿರುಳು
  • ಈ ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು, ಸುಮಾರು 250 ಗ್ರಾಂ ತೂಗುತ್ತವೆ ಮತ್ತು ಅಂಡಾಕಾರವಿದ್ದು, ಬಂಗಾರದ ಹಳದಿ ಬಣ್ಣ ಹೊಂದಿರುತ್ತವೆ.
  • ಟೇಬಲ್ ಹಾಗೂ ಕ್ಯಾನಿಂಗ್‍ಗೆ ಸೂಕ್ತ
  • ಇದರಲ್ಲಿ ಸಕ್ಕರೆ:ಆಸಿಡ್ ಅಂಶಗಳ ಮಿಶ್ರಣ ಉತ್ತಮವಾಗಿರುತ್ತದೆ ಹಾಗೂ ಹೆಚ್ಚು ದಿನಗಳವರೆಗೆ ಉಳಿಯುತ್ತವೆ
  • ರಫ್ತಿಗೆ ಸೂಕ್ತವಾದ ತಳಿ

ಬಂಗನಪಲ್ಲಿ

  • ಮೇ-ಜುಲೈ ತಿಂಗಳ ನಡುವೆ ದೊರೆಯುವ ಮಧ್ಯಂತರ ತಳಿ
  • ಟಿಎಸ್‍ಎಸ್: 18.50 ಡಿಗ್ರಿ ಬ್ರಿಕ್ಸ್ ಹಾಗೂ70% ತಿರುಳು
  • ಈ ಹಣ್ಣುಗಳು ಸಾಧಾರಣವಾಗಿ ದೊಡ್ಡ ಗಾತ್ರ ಹೊಂದಿದ್ದು, ಸರಾಸರಿ 350-400 ಗ್ರಾಂಗಳಷ್ಟು ತೂಗುತ್ತವೆ.
  • ಈ ಹಣ್ಣುಗಳು ಹೊರಗಿನಿಂದ ಬಂಗಾರದ ಹಳದಿ ಬಣ್ಣ ಹಾಗೂ ಒಳಗೆ ಹುಲ್ಲು ಹಳದಿಯಿಂದ ಬಂಗಾರದ ಹಳದಿ ಬಣ್ಣದಲ್ಲಿರುತ್ತವೆ
  • ಇದರ ತಿರುಳು ನಾರುರಹಿತವಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ, ತಿನ್ನಲು ಬಹಳ ಸಿಹಿಯಾಗಿರುತ್ತವೆ
  • ಈ ಹಣ್ಣುಗಳು ಹೆಚ್ಚು ದಿನದವರೆಗೆ ಕೆಡುವುದಿಲ್ಲ
  • ರಫ್ತಿಗೆ ಸೂಕ್ತವಾದ ತಳಿ

ದಶೇಹರಿ

  • ಮಧ್ಯ ಮಾಸಿಕ ತಳಿ
  • ಟಿಎಸ್‍ಎಸ್: 23.13 ಡಿಗ್ರಿ ಬ್ರಿಕ್ಸ್ ಹಾಗೂ92% ತಿರುಳು
  • ಈ ಹಣ್ಣುಗಳು ಸಾಧಾರಣ ಗಾತ್ರ ಹೊಂದಿರುತ್ತದೆ, ಅಂಡಾಕಾರವಿದ್ದು, ಹಳದಿ ಬಣ್ಣ ಹೊಂದಿರುತ್ತವೆ
  • ಇದರ ವಾಟೆ ಸಣ್ಣಗಿದ್ದು, ಹೆಚ್ಚು ದಿನ ಕೆಡುವುದಿಲ

ಕೇಸರ್

  • ಲಭ್ಯವಾಗುವ ಆರಂಭದ ತಳಿ
  • ಸಾಧಾರಣ ಗಾತ್ರ, ಸಿಹಿಯಾದ ರುಚಿ ಹಾಗೂ ನಾರುರಹಿತ
  • ಹೆಚ್ಚು ಸಕ್ಕರೆ-ಆಸಿಡ್ ಮಿಶ್ರಣ
  • ಈ ಹಣ್ಣುಗಳು ಮಾಗಿದ ಮೇಲೆ ಆಕರ್ಷಕ ಏಪ್ರಿಕಾಟ್ ಹಳದಿ ಬಣ್ಣದಿಂದ ತಿಳಿ ಕೆಂಪು ಬಣ್ಣಕ್ಕೆ ತಿರುಗುತ್ತವೆ
  • ಟಿಎಸ್‍ಎಸ್: 17.8 ಡಿಗ್ರಿ ಬ್ರಿಕ್ಸ್ ಹಾಗೂ7% ತಿರುಳು
  • ರಫ್ತಿಗೆ ಸೂಕ್ತವಾದ ತಳಿ ಹಾಗೂ ಹೆಚ್ಚು ದಿನ ಕೆಡುವುದಿಲ್ಲ

ನೀಲಂ

  • ಇದು ಮಾಸದ ಕೊನೆಯಲ್ಲಿ ದೊರೆಯುವ ತಳಿ
  • ಮಧ್ಯಮ ಗಾತ್ರ, ಅಂಡಾಕಾರ ಹಾಗೂ ಕೇಸರಿ ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ
  • ಉತ್ತಮ, ನಾರುರಹಿತ ಹಣ್ಣು, ಹೆಚ್ಚು ದಿನ ಕೆಡುವುದಿಲ್ಲ
  • ಟಿಎಸ್‍ಎಸ್: 20.00 ಡಿಗ್ರಿ ಬ್ರಿಕ್ಸ್ ಹಾಗೂ00% ತಿರುಳು
  • ಪ್ರತಿ ಹಣ್ಣು ಸರಾಸರಿ 200-250 ಗ್ರಾಂ ತೂಗುತ್ತವೆ

ಮಲ್ಲಿಕಾ

  • ನೀಲಂ ಹಾಗೂ ದಶೇಹರಿಗಳಿಂದ ಪಡೆದಿರುವ ಹೈಬ್ರಿಡ್ ತಳಿ
  • ತಳಿ ಸಂವರ್ಧನೆಯ ಮೂಲಕ ಅಭಿವೃದ್ಧಿಪಡಿಸಿರುವ ಮೊದಲ ಮಾವಿನ ಹೈಬ್ರಿಡ್ ತಳಿ
  • ಹೆಚ್ಚು ಇಳುವರಿ, ಕ್ರಮಬದ್ಧ ಹಣ್ಣುಗಳು ಹಾಗೂ ಮಾಸದ ಅಂತ್ಯದಲ್ಲಿ ಲಭ್ಯವಾಗುತ್ತವೆ ಹಾಗೂ ಸರಾಸರಿ 400-600 ಗ್ರಾಂಗಳು ತೂಗುತ್ತವೆ.
  • ಟಿಎಸ್‍ಎಸ್: 27.00 ಡಿಗ್ರಿ ಬ್ರಿಕ್ಸ್ ಹಾಗೂ8% ತಿರುಳು
  • ಹೆಚ್ಚು ದಿನ ಕೆಡುವುದಿಲ್ಲ
  • ಹಣ್ಣುಗಳು ದೊಡ್ಡ ಗಾತ್ರದಲ್ಲಿರುತ್ತವೆ, ಅಂಡಾಕಾರದಲ್ಲಿದ್ದು, ಕೇಸರಿ ಹಳದಿ ಬಣ್ಣ ಹೊಂದಿರುತ್ತವೆ
  • ರಫ್ತಿಗೆ ಸೂಕ್ತವಾದ ತಳಿ

ಮಲ್‍ಗೋವಾ

  • ಇದೊಂದು ಅಂತ್ಯ ಮಾಸಿಕ ತಳಿ
  • ಇದು ದಕ್ಷಿಣ ಭಾರತದ ವಾಣಿಜ್ಯ ತಳಿ
  • ದೊಡ್ಡ ಗಾತ್ರ, ಗುಂಡಾದ ಆಕಾರ ಹಾಗೂ ತಿಳಿ ಹಳದಿ ಬಣ್ಣ ಹೊಂದಿದ್ದು, ನಾರುರಹಿತ ಹಣ್ಣು
  • ಅತ್ಯುತ್ತಮ ಗುಣಮಟ್ಟದ ಹಣ್ಣು ಹಾಗೂ ಹೆಚ್ಚು ದಿನ ಕೆಡುವುದಿಲ್ಲ
  • ಟಿಎಸ್‍ಎಸ್: 20.80 ಡಿಗ್ರಿ ಬ್ರಿಕ್ಸ್ ಹಾಗೂ 64.40% ತಿರುಳು

ಆಮ್ರಪಾಲಿ

  • ದಶೇಹರಿ ಹಾಗೂ ನೀಲಂನಿಂದ ಪಡೆದಿರುವ ಹೈಬ್ರಿಡ್ ತಳಿ
  • ಕುಳ್ಳ, ಕ್ರಮಬದ್ಧವಾಗಿ ಹಣ್ಣು ಬಿಡುವ ಹಾಗೂ ಅಂತ್ಯ ಮಾಸಿಕ ತಳಿ
  • ಅತಿ ಸಾಂದ್ರತೆ ನೆಡುವಿಕೆಗೆ ಸೂಕ್ತವಾದ ತಳಿ
  • ಕ್ಲಸ್ಟರ್ ಬೇರಿಂಗ್ ಹಾಗೂ ಚಿಕ್ಕ ಗಾತ್ರದ ಹಣ್ಣುಗಳು
  • ಟಿಎಸ್‍ಎಸ್: 23.20 ಡಿಗ್ರಿ ಬ್ರಿಕ್ಸ್ ಹಾಗೂ 72.10% ತಿರುಳು

ರಸಪೂರಿ

  • ಮಾಸದ ಆರಂಭಿಕ ಹಣ್ಣು, ದಕ್ಷಿಣ ಭಾರತದಲ್ಲಿ ಬಹಳ ಹೆಸರುವಾಸಿ
  • ಪೈರಿ, ಕಲಮಿ ಎಂದೂ ಕರೆಯಲ್ಪಡುತ್ತದೆ
  • ಹೆಚ್ಚು ತೂಕವಿದ್ದು, ಕ್ರಮಬದ್ಧವಾಗಿ ಹಣ್ಣು ಬಿಡುತ್ತವೆ
  • ಹಣ್ಣುಗಳು ಸಾಧಾರಣ ಗಾತ್ರ ಹೊಂದಿದ್ದು, ಉತ್ತಮ ಗುಣಮಟ್ಟ ಹೊಂದಿರುತ್ತವೆ
  • ರುಚಿಕರ ಹಾಗೂ ಉತ್ತಮ ಸಕ್ಕರೆ-ಆಸಿಡ್ ಮಿಶ್ರಣ
  • ಇದರ ತಿರುಳು ಮೃದುವಾಗಿರುತ್ತದೆ, ಹಳದಿ ಬಣ್ಣ ಹೊಂದಿದ್ದು ನಾರುರಹಿತ ಹಣ್ಣುಗಳು
  • ಇದು ಹೆಚ್ಚು ದಿನ ಕೆಡುವುದಿಲ್ಲ
  • ಟಿಎಸ್‍ಎಸ್: 20.30 ಡಿಗ್ರಿ ಬ್ರಿಕ್ಸ್ ಹಾಗೂ 67.40% ತಿರುಳು

ತೋತಾಪುರಿ

  • ಮಧ್ಯ ಮಾಸಿಕ ತಳಿ
  • ಇತರೆ ಹೆಸರುಗಳು – ಬೆಂಗಳೂರ, ಚಿತ್ತೂರ
  • ಕ್ರಮಬದ್ಧ ಹಾಗೂ ಹೆಚ್ಚು ಹಣ್ಣು ಬಿಡುವ ತಳಿ
  • ಹಣ್ಣುಗಳು ದೊಡ್ಡ ಗಾತ್ರ ಹೊಂದಿದ್ದು, ಸಾಧಾರಣ ಗುಣಮಟ್ಟದ ಹಣ್ಣುಗಳಾಗಿವೆ
  • ವಿಶಿಷ್ಟ ಪರಿಮಳ ಹಾಗೂ ರುಚಿ, ಬಂಗಾರದ ಹಳದಿ ಬಣ್ಣದ ಹಣ್ಣುಗಳು
  • ಸಂಸ್ಕರಣೆಗೆ ಹೆಚ್ಚು ಬಳಸಲಾಗುತ್ತದೆ
  • ಟಿಎಸ್‍ಎಸ್: 17.50 ಡಿಗ್ರಿ ಬ್ರಿಕ್ಸ್ ಹಾಗೂ50% ತಿರುಳು
  • ಒಣ ಪ್ರದೇಶಗಳಲ್ಲಿ ಬೆಳೆಯಲು ಹೆಚ್ಚು ಸೂಕ್ತ

ಸೆಂದೂರ

  • ಮಾಸದ ಆರಂಭಿಕ ತಳಿ, ಏಪ್ರಿಲ್‍ನಿಂದ ಮೇ ತಿಂಗಳವರೆಗೆ ಲಭ್ಯ, ಬೇಗ ಕೆಡಬಹುದು
  • ಇದರ ಸವಿಯಾದ ರುಚಿ ಹಾಗೂ ಪರಿಮಳದಿಂದಾಗಿ “ಜೇನು ಮಾವು” ಎಂದೂ ಕರೆಯಲ್ಪಡುತ್ತದೆ

ಹಿಮಾಮ್ ಪಸಂದ್

  • ಮೇ ತಿಂಗಳಿಂದ ಜೂನ್ ತಿಂಗಳವರೆಗೆ ಲಭ್ಯ
  • ಸರಾಸರಿ ಹಣ್ಣಿನ ತೂಕ 400-600 ಗ್ರಾಂಗಳು
  • ಟಿಎಸ್‍ಎಸ್: 20.10 ಡಿಗ್ರಿ ಬ್ರಿಕ್ಸ್ ಹಾಗೂ50% ತಿರುಳು