
ಮಾವು ನಿಗಮದ ಉದ್ದೇಶ
- ದೇಶೀಯ ಮತ್ತು ರಫ್ತು ಮಾರುಕಟ್ಟೆ ಬೇಡಿಕೆಯಂತೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಉತ್ಪಾದಿಸಲು ಮಾವು ಬೆಳೆಯನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಯಲು ಉತ್ತೇಜಿಸುವುದು.
- ಮಾವು ಹಣ್ಣುಗಳ ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಮಾವು ಬೆಳೆಗಾರರಿಗೆ ಮತ್ತು ಮಾವು ಉದ್ಯಮಿಗಳಿಗೆ ಸಹಕರಿಸುವುದು.
- ಸಂಸ್ಕರಣೆ ಮತ್ತು ಮೌಲ್ಯಾಧಾರಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.
- ಮಾವಿನ ಹಣ್ಣುಗಳ ರಫ್ತು ವಹಿವಾಟನ್ನು ಹೆಚ್ಚಿಸುವುದು ಹಾಗೂ ವಿದೇಶಿ ವಿನಿಮಯಗಳಿಸಲು ಉತ್ತೇಜಿಸುವುದು.
ಮಾವಿನ ಉತ್ಪಾದನೆ ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಎಲ್ಲಾ ಬಾಧ್ಯಸ್ಥಗಾರರಿಗೆ (Stakeholders) ತರಬೇತಿ ನೀಡುವುದರ ಮೂಲಕ ಹೆಚ್ಚಿನ ವೈಜ್ಞಾನಿಕ ಜ್ಞಾನ, ವೃತ್ತಿಪರ ಕೌಶಲ್ಯಗಳನ್ನು ಸಾಧಿಸುವುದು.