
ಯೋಜನೆ
ನಿಗಮದ ಚಟುವಟಿಕೆಗಳು/ ಮಾವು ಬೆಳೆಗಾರರಿಗೆ ನೀಡಲಾಗುತ್ತಿರುವ ಸವಲತ್ತುಗಳು:
- ಮಾವಿನ ಸಮಗ್ರ ಪೋಷಕಾಂಶ ಮತ್ತು ಸಮಗ್ರ ಕೀಟ ನಿರ್ವಹಣೆಗೆ ಅಗತ್ಯವಿರುವ ಪರಿಕರಗಳಾದ – ಮ್ಯಾಂಗೋ ಸ್ಪೆಷಲ್, ಹೀಲರ್ ಕಂ ಸೀಲರ್, ಫೆರಮೋನ್ ಟ್ರಾಪ್ಸ್, ಖರೀದಿಸಲು ಮಾವು ಬೆಳೆಗಾರರಿಗೆ ಪ್ರೋತ್ಸಾಹಧನ.
- ಕೊಯ್ಲೋತ್ತರ ನಷ್ಟ ಕಡಿಮೆ ಮಾಡಲು ಪ್ಲಾಸ್ಟಿಕ್ ಕ್ರೇಟ್ಸ್, ಕಾರ್ಟನ್ ಬಾಕ್ಸ್, ಹಣ್ಣು ಮಾಗಿಸುವ ಘಟಕ, ಹಣ್ಣು ಕಟಾವು ಮಾಡುವ ಸಲಕರಣೆ ಖರೀದಿಸಲು ಪ್ರೋತ್ಸಾಹಧನ.
- ರಫ್ತು ಆಧಾರಿತ ಉಪಚಾರಗಳಾದ ಬಿಸಿ ನೀರಿನ ಉಪಚಾರ ಮತ್ತು ಗಾಮಾ ವಿಕಿರಣ ಉಪಚಾರಗಳಿಗೆ ಪ್ರೋತ್ಸಾಹಧನ.
- ಹೋಬಳಿ ಮಟ್ಟ / ಜಿಲ್ಲಾ ಮಟ್ಟ / ರಾಜ್ಯ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಮಾವು ಬೆಳೆಗಾರರಿಗೆ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಏರ್ಪಡಿಸುವುದು.
- ನೇರ ಮಾರುಕಟ್ಟೆಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಮಾವು ಮೇಳಗಳನ್ನು ಆಯೋಜಿಸುವುದು.
- Global GAP ಪ್ರಮಾಣಿತ ಮತ್ತು APEDA ಮ್ಯಾಂಗೋ ನೆಟ್ ನೊಂದಾಯಿತ ಮಾವು ಬೆಳೆಗಾರರಿಗೆ ರಪ್ತು ವಹಿವಾಟಿನ ಕೌಶಾಲ್ಯಾಭಿವೃದ್ದಿ ತರಬೇತಿ.
- “ಆಸಕ್ತ ಮಾವು ಬೆಳೆಗಾರರಿಗೆ ಆಯ್ದ ಗುಚ್ಛ ಗ್ರಾಮಗಳಲ್ಲಿ ಜಾಗತಿಕ ಉತ್ತಮ ಕೃಷಿ ಪದ್ಧತಿ ದೃಢೀಕರಣ ಕಾರ್ಯಕ್ರಮ.
ರಪ್ತು ಮಾರುಕಟ್ಟೆ ಉತ್ತೇಜನ:
Global GAP ಪ್ರಮಾಣಿಕರಿಸಿದ ತೋಟಗಳು:
- 2016-17 ನೇ ಸಾಲಿನಲ್ಲಿ = 214 ಹೆ.,
- 2017-18 ನೇ ಸಾಲಿನಲ್ಲಿ = 934 ಹೆ.,
- 2018-19 ನೇ ಸಾಲಿನಲ್ಲಿ = 200 ಹೆ.,